ನವೋದಯ ನೆನಪು
ನವೋದಯದ ಒಂದು ದಿನ
‘ಮೂಷಿಕ ವಾಹನ ಮೋದಕ ಹಸ್ತ’ ಅಂತ ಹಾಡ್ ಬಂದಾಗೇ ಎಚ್ಚರ ಆಗೋದು. ಒಂದೊಂದ್ ಸಲ ಅದು ಕನಸೇನೂ ಅನ್ಸೋದು ಆದ್ರೆ ಅದರ ಜೊತಿಗೆ ಪಿಇಟಿ ಸರ್ ವಿಸಿಲ್ ಬಂತು ಅಂದ್ರೆ ಸಾಕು, ಧಡ್ ಧಡ್ ಧಡ್ ಧಡ್ ಅಂತ ಓಡೋದೇ ಎಲ್ಲಾರು. ಕೆಲ್ವೊಬ್ಬರಂತೂ ಅರ್ಧ ಗಂಟೆ ಮೊದಲೇ ಎದ್ದು ಹಲ್ಲು ಉಜ್ಜಿ ರೆಡಿ ಆಗಿರೋರು. ಅದೆಂಗೆ ಟೈಮ್ ಸಿಗ್ತಿತ್ತೋ. ರಾತ್ರಿ ಮಲ್ಕೊಳಕ್ಕಿಂತ ಮೊದ್ಲು ಎಲ್ಲಾರ್ದೂ ಒಂದೇ ವಿಶ್ ಇರೋದು. ಪಿಇಟಿ ಸರ್ ಗೆ ಹುಷಾರ್ ಇರಲಾರದಂಗ ಆಗ್ಲಿ, ಲೇಟ್ ಆಗಿ ಏಳಲಿ ಅಂತ. ಏಳು ವರ್ಷದಾಗ ಬೇರೆ ಏನಾದ್ರು ಆಗಿರ್ಬೋದು ಬಟ್ ಇದಂತೂ ಆಗಿಲ್ಲ. ಮುಂಜಾನೆ ನಾಲ್ಕು ನಲ್ವತ್ತೈದು ಆಯ್ತಂದ್ರೆ ವಿಸಲ್ ಶುರು. ಎಷ್ಟೊಂದ್ ಸರ್ತಿ ಸರ್ ಮೂಡ್ ಸರಿ ಇರ್ಲಿಲ್ಲ ಅಂದ್ರೆ ಹೌಸ್ ಒಳಗ್ ಬಂದು ಸಿಕ್ಕೋರಿಗೆಲ್ಲ ರಪ್ ರಪ್ ಅಂತ ಬಾರಿಸ್ತಿದ್ರು. ಚಳಿಗಾಲದಾಗಂತೂ ಏಟು ಬಿದ್ರೆ ಅಟ್ ಲೀಸ್ಟ್ ಮೂರ್ ಟಾಸ್ ಇರ್ತಿತ್ತು ನೋವು. ಒಳಗ್ ಬಂದ್ರಂತ ಗೊತ್ತಾಗೋದೇ ತಡ ಎಷ್ಟೊಂದ್ ಜನ ಕಿಡಕಿ ನ್ಯಾಗ್ ಆಗಿರೋ ಗ್ಯಾಪ್ ನ್ಯಾಗೆ ಹಾರ್ಕೊಂಡ್ ಬಿಡೋರು. ನೀರಿನ ಟ್ಯಾಂಕಿಗೆ ಓಡಿಹೋಗಿ ಬಾಯಿ ಮುಕ್ಕಳಿಸ್ಕೊಂಡು ಗ್ರೌಂಡ್ ಗೆ ಒಡೋರು.
ಬಂಡಿ ಇಂದ ಹಾಡ್ ಅಂತೂ ಹಂಗೆ ಬರ್ತಿರತಿತ್ತು. ಅದರ ಜೊತಿಗೆ ಗಾಂಧಿ ಕಂಪನಿ ಕ್ವಾರಿ ನು ಸ್ಟಾರ್ಟ್ ಆಗಿದ್ರೆ ಮುಗಿತು, ಬಾಜು ಇರೋರೋ ಮಾತಾಡೋದು ಕೇಳಿಸ್ತಿರ್ಲಿಲ್ಲ.
ಅಟೆಂಡೆನ್ಸ್ ಟೈಮ್ ನ್ಯಾಗ್ ಯಾರಾದ್ರೂ ಬಂದಿಲ್ಲ ಅಂತ ಸರ್ ಗೆ ಗೊತ್ತಾದ್ರೆ ಅವ್ರ ಪೆಟ್ ದಾಂಡಿಗರನ್ನ ಕಳ್ಸಿ ಎಳ್ಕೊಂಡ್ ಬರಾಕ್ ಹೇಳತಿದ್ರು . ಹಂಗ ಸಿಗೆ ಬಿದ್ದವ್ರ್ದೆಲ್ಲಾ ಏನ್ ಕೇಳ್ತೀರಿ ಕಥಿ. ಬ್ರಷ್ ಮಾಡ್ಕೊಂಡ್ ಬಾರ್ಲಾರ್ದವೃದೂ ಅದೇ ಕಥಿ, ಎಕ್ಸ್ಟ್ರಾ ಸ್ಪೆಷಲ್ ಏಟು. ಎಲ್ಲ ಚೆಕಿಂಗ್ ಮುಗುದ್ ಮ್ಯಾಲೆ ರನ್ನಿಂಗ್ ಸ್ಟಾರ್ಟ್.
ದಿನ ಚೊಲೋ ಇತ್ತಂದ್ರೆ ಓಡೋದಿಕ್ಕೆ ಕುಕ್ನೂರ್ ತನಕ ಕರ್ಕೊಂಡ್ ಹೋಗೋರು. ಅದೇ ನಮಗ ಖುಷಿ ಏನೋ ಕ್ಯಾಂಪಸ್ ಇಂದ ಹೊರಗ್ ಹೋಗಿವ್ಯಲ್ಲ ಅಂತ. ವಾಪಸ್ ಬಂದ್ ಮ್ಯಾಲೆ ಯುಶುಅಲ್ ಗ್ರೌಂಡ್ ಕಿಂತ ಬ್ಯಾಸ್ಕೆಟ್ಬಾಲ್ ಕೋರ್ಟ್ ನ್ಯಾಗ ಎಕ್ಸರ್ಸೈಜ್ ಮಾಡೋದು ಏನೋ ಮಜಾ.
ದಿನ ಸರಿ ಇರ್ಲಿಲ್ಲ ಅಂದ್ರ ಅಲ್ಲೇ ಗ್ರೌಂಡ್ ನ್ಯಾಗ ಒಂದು ಹತ್ತು ರೌಂಡ್ ಓಡ್ಸಿ ಅಲ್ಲೇ ಎಕ್ಸರ್ಸೈಜ್ ಮಾಡ್ಸಿ ಕಳ್ಸೋರು.
ದಿನ ಇನ್ನೂ ಖರಾಬ್ ಇತ್ತಂದ್ರ ಯೋಗ. ಯೋಗ mp ಹಾಲ್ ನ್ಯಾಗ್ ಇದ್ರೆ ಉಳ್ಕೊಂಡ್ವಿ. ಬೆಚ್ಚಗಿರೋದು, ಶವಾಸನ ಬಂದಾಗ ಬೆಚ್ಚಗ ಮಲ್ಗಬೋದಿತ್ತು. ಆದ್ರೆ ಹೊರಗ್ ಏನಾದ್ರು ಇದ್ರೆ ಆ ಚಳಿಗೆ ಸತ್ತೇ ಹೋಗ್ತಿವೇನೋ ಅನ್ಸ್ತಿತ್ತು. ಅದೂ ಅಲ್ದೆ ಯೋಗಕ್ಕ ಉಪಯೋಗಿಸಿರೋ ಬೆಡ್ಶೀಟ್ ನ ಬ್ಯಾರೆ ಒಗಿಬೇಕು. :-(. ಸ್ಪೋರ್ಟ್ಸ್ ಟೀಮ್ ನ್ಯಾಗ್ ಇರೋವ್ರದೇ ಲಕ್ಕು. ಜಾಗಿಂಗ್ ಟೈಮ್ ನ್ಯಾಗು ಆಟ ಆಡ್ಲಿಕ್ ಹೋಗೋರು. ಬೇರೆವರಿಗೆಲ್ಲಾ ಉರ್ಸ್ಕೊತ. ಇನ್ನ ಕೈ ಕಾಲ್ ಬ್ಯಾನಿ ಅಂತ ಆರಾಮ್ ಗ್ರೌಂಡ್ ತುಂಬಾ ವಾಕ್ ಮಾಡೋರ್ನ ನೊಡಿದ್ರಂತೂ ಎಲ್ಲಕಡೆ ಇಂದ ಬೆಂಕಿ ಬರೋದು.
ಹಂಗು ಹಿಂಗು ಜಾಗಿಂಗ್ ಮುಗಿತು ಅನ್ನೋದ್ರಾಗೆ ರೆಡಿ ಆಗಿ ಅಸ್ಸೆಂಬಲಿಗೆ ಹೋಗೋ ಟೆನ್ಶನ್. ನಂಬರ್ ೨ ಗೆ ಹೋಗೋದೇ ಒಂದು ದೊಡ್ಡ ಚಾಲೆಂಜ್. ಭಾರಿ ಹುಷಾರಿರೋರು ಏನು ಮಾಡಿ ರಾತ್ರಿ ನೇ ಒಂದು ಜಗ್ ಇಲ್ಲ ಬಾಟ್ಲಿ ಬಚ್ಚಿಟ್ಟಿರೋರೋ ಟೆನ್ಶನ್ ಇಲ್ಲಾರ್ದೆ ಕೆಲಸ ಮುಗುಸ್ಕೊಂಡ್ ಬರೋರು. ಉಳ್ದವ್ರು ಲೈನ್ ನ್ಯಾಗ ಕಾಯ್ಕೋತ ನಿಲ್ಲೋರು ವಾಪಸ್ ಬರೋರ್ ಹತ್ರ ಇಸ್ಕೊಲಿಕ್ಕೆ. ಇನ್ನು ಸ್ವಲ್ಪ ಕ್ಲೋಸ್ ಇರೋರು ಯಾವದಾದ್ರು ಬಕೆಟ್ ಸಿಕ್ರೆ ಸಾಕು, ಒಂದರಾಗೆ ೪-೫ ಜನ ಅಡ್ಜಸ್ಟ್ ಮಾಡ್ಕೊಂಡ್ ಹೋಗೋರು. ಅಲ್ಲಿ ಒಬ್ರುದಾದ್ ಮೇಲೆ ಇನ್ನೊಬ್ರಿಗೆ ಪಾಸ್ ಮಾಡಿ ಕೆಲಸ ಮುಗುಸ್ಕೊಂಡ್ ಬರೋರು.
ಯಾರಿಗೆ ಚೊಂಬು ಕೊಡ್ತೀವಿ ಅಂತ ಎಷ್ಟು ನೆನಪಿಟ್ಕೋತಾ ಇದ್ವಿ ಅಂದ್ರೆ, ನಮ್ಮ ಸೈಲ್ಲಬಸ್ ನು ಅಷ್ಟ ನೆನ್ಪಿರ್ತಿರಲಿಲ್ಲ. ಇಲ್ಲಾಂದ್ರೆ ನಾಳೆಗೆ ಮತ್ತೆ ಕಷ್ಟ ಆಗೋದು. ಒಬ್ಬೊಬ್ಬರಂತೂ ತಂಬಿಗೆ ಬಕೆಟ್ ಮ್ಯಾಲೆ ಹೆಸ್ರೇ ಬರೆಯೋರು.
ನಂಬರ್ ೨ ಆದ್ಮ್ಯಾಲೆ ಸ್ನಾನದ್ದೇ ಒಂದು ದೊಡ್ಡ ಸರ್ಕಸ್. ಮಳೆಗಾಲದಾಗ ನೀರಿಂದ ಏನು ಪ್ರಾಬ್ಲಮ್ ಆಗ್ತಿರ್ಲಿಲ್ಲ. ಆದ್ರೆ ಬ್ಯಾಸಿಗಿ ಕಾಲ್ದಗಂತೂ ಫಜೀತಿ ನೇ. ಎಷ್ಟೋ ಸಲ ನೀರ್ ಇರಲಾರ್ದೆ ಕಾಂಪೌಂಡ್ ಹೊರಗಿರೋ ಬೋರ್ ಗೋ ಇಲ್ಲ ಅಲ್ಲೂ ನೀರ್ ಇರಲಾರ್ದೆ ಇನ್ನು ಸ್ವಲ್ಪ ಇರೋ ಬಂಡಿ ಗೋ ಹೋಗ್ಬೇಕಾಗ್ತಿತ್ತು. ಆ ಚಳಿ ನ್ಯಾಗ ಅದೆಂಗೆ ತಣ್ಣೀರು ಸ್ನಾನ ಮಾಡುತಿದ್ವೋ ಗೊತ್ತಿಲ್ಲ. ಸ್ಕೂಲ್ ನ್ಯಾಗ್ ಕೊಡೊ palmolive ಇಲ್ಲ ಲಕ್ಸ್ ಸೋಪ್ ಹಚ್ಕೊಂಡ್ರೆ ಚಳಿಗಾಲದಾಗಂತೂ ಎಲ್ಲಾರ್ದೂ ಭೂತದ ಮುಖಾನೇ.
ಕೆಲವೊಬ್ಬ ಮಹಾಶಯರಂತೂ ರಾತ್ರಿ ನೇ ಸ್ನಾನ ಮಾಡಿ ಸ್ಕೂಲ್ ಡ್ರೆಸ್ ಹಾಕ್ಕೊಂಡ್ ಮಲಗಿ ಮುಂಜಾನೆ ಬರಿ ಮಾರಿ ತೊಳುಕೊಂಡು ರೆಡಿ ಆಗಿಬಿಡೋರು.
ಸ್ನಾನ ಆದಕೂಡ್ಲೆ ವೈಟ್ ಶರ್ಟ್ ಗ್ರೇಯ್ ಪ್ಯಾಂಟ್ ಹಾಕ್ಕೊಂಡು ಬ್ಲಾಕ್ ಶೂ ಫುಲ್ ಪೋಲಿಷ್ ಮಾಡಿ ಹಾಕೊಂಡು ಸ್ಕೂಲ್ ಕಡೆ ಹೋಗೋದು. ಅಷ್ಟ್ರಾಗೆ ಪಿಇಟಿ ಸರ್ ಮನ್ಯಾಗ ಛಾ ಕುಡುದ್ ಇನ್ನೊಂದ್ ರೌಂಡ್ ಹುಡುಗುರ್ನ ಹೊಡಿಯೋದಕ್ಕ ಬರೋರು.
೭ ಗಂಟಿಗೆ ಅಸ್ಸೆಂಬಲಿ ಶುರು. ಎಲ್ಲರು ಕ್ಲಾಸ್ ವೈಸ್, ಹೈಟ್ ವೈಸ್ ಲೈನ್ ನ್ಯಾಗ್ ನಿಲ್ಲೋರು. ಡಾಸ್(DOS) ಪೇಶಂಟ್ಸ್ ಅಸ್ಸೆಂಬಲಿ ತಪ್ಪುಸ್ಕೊಂಡು ಪ್ರಿನ್ಸಿಪಾಲ ರೂಮ್ ಮುಂದೋ ಇಲ್ಲ ಕ್ಲಾಸ್ ನ್ಯಾಗೂ ಕೂತು ಮಜಾ ಮಾಡೋರು.
ಲೇಜಿ ಇರೋರು ಇಲ್ಲ ಸ್ನಾನಕ್ಕೋ ಇನ್ನೊಂದಕ್ಕೋ ಚೊಂಬು ಬಕೆಟ್ ಸಿಗಲಾರದವ್ರು ಉಸ್ರು ಕಟ್ಟೋ ಹಂಗ ಓಡಿ ಅಸ್ಸೆಂಬಲಿ ಲೈನ್ ಸೇರ್ಕೊಳ್ಳೋರು. ಹಂಗ ಓಡಿ ಬರೋದ್ ಲೇಟ್ ಆದ್ರ ಮತ್ತ ಪಿಇಟಿ ಸರ್ ಕೈಯಾಗ್ ಬೀಳ್ತಿದ್ವು. ಪಿಇಟಿ ಸರ್ ಎಲ್ಲರದು ಶೂ ಚೆಕ್ ಮಾಡಿ ಜೂನಿಯರ್ಸ್ ಯಾರಾದ್ರೂ ಧಿಮಾಕ್ ಮಾಡ್ಲಿಕ್ಕೆ ಪ್ಯಾಂಟ್ ಹಾಕೊಂಡ್ ಬಂದಿದ್ರ ಮತ್ತ ಒಂದೆರಡು ಕೊಡ್ತಿದ್ರು. ಆದರು ಕೆಲುವೊಂದು ಡಿಬಿಗಳು(DB's) ಪಿಇಟಿ ಸರ್ ಗೆ ಅಡಿ ಹಚ್ಚಿ ಅದೆಂಗೋ ತಪ್ಪುಸ್ಕೊಳ್ಳೋರು. ಉಳದವ್ರ ಪ್ಯಾಂಟ್ ಜೇಬಿನಗಾ ಕೈ ಹಾಕಿ ಸರಕ್ ಅಂತ ಎಳ್ದು ಪೂರಾ ಪ್ಯಾಂಟ್ ಹರಿತಿದ್ರು ಪಿಇಟಿ ಸರ್.
ಅಸ್ಸೆಂಬಲಿ ನ್ಯಾಗ ಗಿಡ್ಡ ಇರೋರ್ದೆ ಒಂದು ದೊಡ್ಡ ಟೆನ್ಶನ್ ಪಾಪ. ಮ್ಯೂಸಿಕ್ ಸರ್.. ಮುಂದಿನ ಒಂದ ಎರ್ಡ ಲೈನ್ ನ್ಯಾಗ ನಿಂತೋರು ಎಲ್ಲರಿಗಿಂತ ಹೆದ್ರುಕೋಳ್ಳೊದ ಮ್ಯೂಸಿಕ್ ಸರ್ ಗೆ. ಮ್ಯೂಸಿಕ್ ಸರ್ ಮಿಸ್ ಮಾಡಲಾರದೆ ಎಲ್ಲರು ಜೋರಾಗ್ ಹಾಡ್ತಾರೋ ಇಲ್ಲೋ ಅಂತ ನೋಡೋರು. ಅಪ್ಪಿ ತಪ್ಪಿ ಯಾರಾದ್ರೂ ಹಾಡ್ಲಾರ್ದವರು ಕಣ್ಣಿಗೆ ಬಿದ್ರೋ..ಸತ್ತ್ರು.. ಮ್ಯೂಸಿಕ್ ಸರ್ ಅಸ್ಸೆಂಬಲಿ ಮುಗುಡ್ ಮ್ಯಾಲೆ ಡಿಸ್ಪೆರ್ಸ್ ಆಗೋಕಿಂತ ಮೊದ್ಲು ಮಸ್ತ್ ಸ್ಮೈಲ್ ಮಾಡ್ಕೋತ ಬರೋರು. 'ಯಾಕ್ಪಾ ಏನಾತು ಹಾಡವಲ್ಲಿ' ಅಂತ ನಕ್ಕೋತೆ ರಪ್ ರಪ್ ಅಂತ ಮಾರಿಗ್ ಬರ್ಸೊರು. ಹೊಡುಸ್ಕೊಂಡೋರ್ ಗಲ್ಲ ಫುಲ್ ಕೆಂಪ್ ಕೆಂಪ್ ಗ.
ಅಸ್ಸೆಂಬಲಿ ಎಲ್ಲರಿಗೆ ಸಾಕ್ ಸಾಕ್ ಅನ್ಸಿದ್ರುನು ಏನೋ ಒಂಥರಾ ಖುಷಿ ಕೊಡೋದು. ನವೋದಯ ಹಾಡು, ದಿನ ಬೇರೆ ಬೇರೆ ಭಾಷಣ ಸ್ಟೇಜ್ ಮ್ಯಾಲೆ. ಒಂದು ದಿನ ಬರಿ ಭಾಷಣ ಇನ್ನೊಂದಿನ ಸುಳ್ಳು ವಾರ್ತೆ. ದಿನ ಥಾಟ್ ಫಾರ್ ದಿ ಡೇ ಅಂತೂ ಇರೋದು. ಒಬ್ಬೊಬ್ರು ಎಫರ್ಟ್ ಹಾಕಿ ಒಳ್ಳೆ ಥಾಟ್ ಹೇಳಿದ್ರೆ ಇನ್ನು ಕೆಲುವೊಬ್ರು ಬರಿ 'ತಾಯಿಯೇ ದೇವರು' ನೋ ಇಲ್ಲ 'ಗಾಡ್ ಐಸ್ ಗ್ರೇಟ್' ಓ ಅಂತ ಹೇಳಿ ಮುಗ್ಸೋರು. ಸ್ಟೇಜ್ ಮ್ಯಾಲೆ ಆಗೋ ಮಿಸ್ಟೇಕ್ಸ್ ನ ನೋಡಿ ನಗೋದೇ ಒಂದು ಮಜಾ.
ಅಸೆಂಬ್ಲಿಯ ಭಾಳ್ ಹೊತ್ತು ಆಯ್ತಂದ್ರೆ ಸುಮ್ಮ್ ಸುಮ್ಮನೆ ತಲಿ ತಿರುಗಿ ಬೀಳೋರು ಭಾಳ್ ಕಾಮನ್. ಬಿದ್ದೋವ್ರನ್ನ ಕರ್ಕೊಂಡ್ ಹೋಗೋವ್ರದೇ ಚಾನ್ಸ್. ಆರಾಮಾಗಿ ಎಸ್ಕೇಪ್ ಆಗಿ ಬಿಡೋರು. ಸಿಕ್ ಆದವರಿಗೆ ನರ್ಸ್ ಮೇಡಂ ತಿಂಡಿಗೆ ಪಾರ್ಲೆ ಜಿ ಬಿಸ್ಕಿಟ್ ಹಾಲು ಬರ್ದು ಕೊಡೋರು. ದಿನ ತಿನ್ನೋ ತಿಂಡಿಗಿಂತ ಸ್ಪೆಷಲ್ ಪಾರ್ಲೆ ಜಿ ಬಿಸ್ಕಿಟ್ ತಿನ್ನೋದು ಏನೋ ಖುಷಿ.
ಅಸೆಂಬ್ಲಿಯ ಭಾಳ್ ಹೊತ್ತು ಆಯ್ತಂದ್ರೆ ಸುಮ್ಮ್ ಸುಮ್ಮನೆ ತಲಿ ತಿರುಗಿ ಬೀಳೋರು ಭಾಳ್ ಕಾಮನ್. ಬಿದ್ದೋವ್ರನ್ನ ಕರ್ಕೊಂಡ್ ಹೋಗೋವ್ರದೇ ಚಾನ್ಸ್. ಆರಾಮಾಗಿ ಎಸ್ಕೇಪ್ ಆಗಿ ಬಿಡೋರು. ಸಿಕ್ ಆದವರಿಗೆ ನರ್ಸ್ ಮೇಡಂ ತಿಂಡಿಗೆ ಪಾರ್ಲೆ ಜಿ ಬಿಸ್ಕಿಟ್ ಹಾಲು ಬರ್ದು ಕೊಡೋರು. ದಿನ ತಿನ್ನೋ ತಿಂಡಿಗಿಂತ ಸ್ಪೆಷಲ್ ಪಾರ್ಲೆ ಜಿ ಬಿಸ್ಕಿಟ್ ತಿನ್ನೋದು ಏನೋ ಖುಷಿ.
ಮ್ಯೂಸಿಕ್ ಕ್ಲಬ್ members ಎಲ್ಲ ಹಾಡಿಗೋ ಒಂದೇ ಟ್ಯೂನ್ ಬಾರ್ಸವ್ರು. ತಬಲಾ ಕಾಂಗೊ ಪೇಟಿ ಎಲ್ಲ ಒಂದೇ ಮ್ಯೂಸಿಕ್ ಕೊಡೊವು. ಆದರು ೭ ವರ್ಷ ಕೇಳಾಕ್ ಏನು ಬ್ಯಾಸರ ಆಗಿಲ್ಲ.
ಡಿಸ್ಪೆರ್ಸ್ ಆಗೋ ಮುಂದ ಮ್ಯೂಸಿಕ್ ಬ್ಯಾಂಡ್ ಕೇಳೋದೂ ಅಷ್ಟೇ ಮಜಾ. ನವೋದಯ ದಾಗ ಓದಿರೋ ಪ್ರತಿಯೊಬ್ಬರಿಗೂ ಒಂದ್ ಸರಿಯರ ಆ ಮ್ಯೂಸಿಕ್ ಬ್ಯಾಂಡ್ ನ್ಯಾಗ್ ಇರ್ಬೇಕು ಅಂತ ಅನ್ನಿಸಿರಲೇಬೇಕು.
ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ ಅಂತ ಕ್ಲಾಸ್ ರೂಮ್ಸ್ ನಮ್ಮನ್ನ ಸ್ವಾಗತ ಮಾಡವು. ದಿನ ಮರಿಲಾರ್ದೆ 'ಅ ಜರ್ನಿ ಆಫ್ ಥೌಸಂಡ್ ಮೈಲ್ಸ್ ಸ್ಟಾರ್ಟ್ಸ್ ವಿಥ್ ಜಸ್ಟ್ ಒನ್ ಸ್ಟೆಪ್' ನ್ ಓದಿನೆ ಕ್ಲಾಸ್ ಗೆ ಹೋಗೋದು.
ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ ಅಂತ ಕ್ಲಾಸ್ ರೂಮ್ಸ್ ನಮ್ಮನ್ನ ಸ್ವಾಗತ ಮಾಡವು. ದಿನ ಮರಿಲಾರ್ದೆ 'ಅ ಜರ್ನಿ ಆಫ್ ಥೌಸಂಡ್ ಮೈಲ್ಸ್ ಸ್ಟಾರ್ಟ್ಸ್ ವಿಥ್ ಜಸ್ಟ್ ಒನ್ ಸ್ಟೆಪ್' ನ್ ಓದಿನೆ ಕ್ಲಾಸ್ ಗೆ ಹೋಗೋದು.
ಯೋಳು ವರಿ ಇಂದ ಎಂಟು ನಲ್ವತ್ತೈದರ ತಂಕ ಎರಡು ಕ್ಲಾಸೆಸ್. ಅಷ್ಟರಾಗೆ ಟೈಮ್ ಸಿಕ್ರೆ ಲೈಬ್ರರಿ ಗೆ ಓಡಿ ನ್ಯೂಸ್ ಪೇಪರ್ ಓದಿಕೊಂಡ ಬರೋದು. ಕ್ರಿಕೆಟ್ ಮ್ಯಾಚ್ ಇದ್ದಾಗಂತೂ ಲೈಬ್ರರಿ ಗೆ ಪೂರಾ ಡಿಮ್ಯಾಂಡ್.
ಬುಧವಾರ ನೋ ಇಲ್ಲ ಶನಿವಾರೋ ನೋ ಆಗಿದ್ರ ಬ್ರೇಕ್ಫಾಸ್ಟ್ ಮಜಾ ನೇ ಬ್ಯಾರೆ. ಎಲ್ಲರ ಫೇವರಿಟ್ ಕಿಚಡಿ. ಮೆಸ್ಸ್ ನವ್ರು ಅದೇನ್ ಹಾಕ್ತಿದ್ರೋ ಕಿಚಡಿ ನ್ಯಾಗ, ಅಬಬ ಏನ್ ಟೇಸ್ಟ್ ಅದು. ಕಿಚಡಿ ಜೊತಿಗೆ ಮನಿ ಇಂದ ತಂದ ಬ್ಯಾರೆ ಬ್ಯಾರೆ ಪುಡಿ ಹಾಕ್ಕೊಂಡ್ ತಿಂದ್ರೆ ಸೂಪರ್. ಪುಡಿ ಯಾರ್ ಹತ್ರ ಅದ ಅಂತ ಹುಡುಕ್ಲಿಕ್ಕೆ ಎಲ್ಲರು ಡೆಟೆಕ್ಟಿವ್ಸ್ ಆಗಿ ಬಿಡೋರು. ಇವನ ಹತ್ರ ಅದ ಅಂತ ಗೊತ್ತಾದ್ರೆ ಸಾಕು, ಹಿಂದಿನ ದಿನದಿಂದೆ ಅವ್ನಿಗೆ ಅಡಿ ಹಚ್ಚಕ್ ಸ್ಟಾರ್ಟ್. ಕಿಚಡಿ ಹಾಕುಸ್ಕೊಂಡು ಹೊರಗ್ ಎಸ್ಕೇಪ್ ಆಗಿ ಹೋದವರಂತೂ ಭಾರಿ ಪುಣ್ಯಾತ್ಮರು. ಎಲ್ಲ ಟೈಪ್ ಪುಡಿ ಉಪ್ಪಿನಕಾಯಿ ಹಾಕ್ಕೊಂಡ್ ಹಸಿರು ಇರೋ ಕಿಚಡಿ ನ ಕೆಂಪ್ ಮಾಡ್ಕೊಂಡ್ ತಿನ್ನೋರು. ಕಿಚಡಿ ದು ಎಲ್ಲದಕ್ಕಿಂತ ಸ್ಯಾಡ್ ಪಾರ್ಟ್ ಅಂದ್ರೆ ತಿಂದ್ಮ್ಯಾಲೆ ಪ್ಲೇಟ್ ತೊಳಿಯಾದು. ಅಬ್ಬಾ ಅದೇನ್ ಹಚ್ಚಿ ತೊಳಿತಿದ್ವೋ ಪ್ಲೇಟ್ ನ ಜಿಡ್ಡು ಹೋಗ್ಸಕ.
ಮಂಗಳವಾರ ಇಡ್ಲಿ ಚಟ್ನಿ ಸೆಕೆಂಡ್ ಫೇವರಿಟ್. ನವೋದಯ ದಾಗ ತಿಂದಿರೋ ಚಟ್ನಿ ಇನ್ನು ತಂಕ ಎಲ್ಲೂ ತಿಂದಿಲ್ಲ. ದಿನ ತಿಂಡಿ ಜೊತಿಗೆ ಸ್ಪೆಷಲ್ ಛಾ ಇಲ್ಲ ಬೌರ್ನ್ವಿಟಾ(ಛಾ ಕುಡಿಲಾರ್ದ ನನ್ನಂತವರಿಗೆ).
ಪ್ಲೇಟ್ ತೊಳಿಯೋದು ಭಾರಿ ಸ್ಟೈಲಾ ಮತ್ತ. ಟ್ಯಾಂಕ್ ಮ್ಯಾಲೆ ಒಂದು ಕಾಲು ಕೆಳಗ್ ಒಂದು ಕಾಲು ಇಟ್ಟು ನೀರ್ ಸಿಡಿಲಾರದಂಗ ತೊಳಿಯದು. ಭಾಳ್ ರಶ್ ಇತ್ತಂದ್ರ 'ಕುಡ್ಯಾಕ್ ಕುಡ್ಯಾಕ್ ಕುಡ್ಯಾಕ್' ಅಂದ್ರ ಸಾಕು ಜಾಗ ಸಿಗೋದು. ಕುಡ್ಯಾಕ್ ಹಿಡದಾಗ ಯಾವಾನರ ಒಂದ್ ಹನಿ ನೀರ್ ಸಿಡಸಿದ ಪ್ಲೇಟ್ ನ್ಯಾಗ ಅಂದ್ರ ಸಿಟ್ಟ ಆಗಿ 'ಕುಡ್ಯಾಕ್ ಲೇ ಮಂಗ್ಯಾ' ಅಂತ ಬೈದು, ಎಲ್ಲ ನೀರ್ ಚಲ್ಲಿ ಮತ್ತ ತುಂಬಸ್ಕೊಳ್ಳೋದು. ಯೋಳು ವರ್ಷದಾಗ ಒಂದ್ ಸಲ ನು ನೀಟ್ ಆಗಿ ಗ್ಲಾಸ್ ನ್ಯಾಗ್ ನೀರ್ ಕುಡ್ದಿಲ್ಲ. ಬರಿ ಪ್ಲೇಟ್ ನ್ಯಾಗೆ.
ಟಿಫನ್ ಮುಗ್ಸಿ ಪ್ಲೇಟ್ ಒಂದ ಬೆರಳಾಗ ತಿರ್ಗಿಸ್ಕೊತ ಡಾರ್ಮಿಟೋರಿ ಗೆ ಹೋಗದು. ಪ್ಲೇಟ್ ತಿರ್ಗ್ಸೋದೇ ಒಂದು ದೊಡ್ಡ ಸ್ಕಿಲ್ ಅಲ್ಲಿ. :-)
ಮಧ್ಯಾಹ್ನ ಊಟದ್ ಟೈಮ್ ನ್ಯಾಗ ಫಸ್ಟ್ ಬ್ಯಾಚ್ ಹೋಗೋರಿಗೆ ಯಾರ್ ಪ್ಲೇಟ್ ಇಸ್ಕೊತಾರೋ ಅನ್ನೋ ಟೆನ್ಶನ್. ಕರೆಕ್ಟ್ ಆಗಿ ನೆಂಪಿಟ್ಕೊಂಡ್ ರಾತ್ರಿ ವಾಪಸ್ ಇಸ್ಕೊಂಡಿಲ್ಲ ಅಂದ್ರೆ ಮತ್ತೆ ನೆಕ್ಸ್ಟ್ ಡೇ ಒದ್ದಾಡಬೇಕು. ಪ್ಲೇಟ್ ಮ್ಯಾಲೆ ಬ್ಯಾರೆ ಬ್ಯಾರೆ ಮೂವಿ ಹೆಸರೋ ಇಲ್ಲ ಇನ್ನೇನೋ ಹೆಸರೋ ಬರ್ಕೊಳ್ಳೋದು. ಇಲ್ಲಾಂದ್ರೆ ಒಂದ ಸಲ ಕಳೀತಂದ್ರೆ ಹೋತೇ ಪ್ಲೇಟ್. ಖಾನಿ ಪ್ಲೇಟ್ ಅಂತೂ ಬ್ಯಾರೆ ಕಲರ್ ಆಗಿರವು ಜಿಡ್ಡು ಹಿಡದು.
ಟೇಸ್ಟ್ ಹೆಂಗೆ ಇದ್ರೂ ನಮ್ ನವೋದಯ ಊಟಾನ ಎಂದು ಮರಿಯಲ್ಲ.
ಹೌಸ್ ಆನ್ ಡ್ಯೂಟಿ ಇರೋರ್ದೆ ಲಕ್ಕು. ಎಲ್ಲರದು ಆದ್ಮೇಲೆ ಉಳ್ದಿದ್ದೆಲ್ಲ ಅವರದೇ. ಫುಲ್ ಮಜಾ. ಅಸತೋಮ ಸದ್ಗಮಯ, ತಮಸೋಮಾ ಜ್ಯೋತಿರ್ಗಮಯ, ಮೃತ್ಯೋರ್ಮಾ ಅಮೃತಂಗಮಯ ಅಂತ ಹಾಡಿ ತಿಂದ್ರೇನೇ ನಮ್ ಹೊಟ್ಟಿಗೆ ಊಟ ಹತ್ತೋದು.
ಮಧ್ಯಾಹ್ನ ಊಟ ಆದ್ಮೇಲೆ ಸುಖಪುರುಷರು ನಿದ್ದಿ ಮಾಡೋರು. ಸ್ವಲ್ಪ ಧೈರ್ಯ ಇರೋರು ಕಾಂಪೌಂಡ್ ಹಾರಿ ಗುದ್ನೇಪ್ಪನ ಮಠಕ್ಕ ಹೋಗಿ, ಶೆಟ್ಟಿ ಅಂಗಡಿ ನ್ಯಾಗ ೫ ರೂಪಾಯಿ /ಮಿನಿಟ್ ಮನಿಗ್ ಫೋನ್ ಮಾಡಿ ಏನಾರ ತಿನ್ಲಿಕ್ಕೆ ತೊಗೊಂಡ್ ಬರೋರು. ಇನ್ನು ಕೆಲವೊಬ್ರು ಟೈಮ್ ಇದ್ರೆ ಬಟ್ಟಿ ಎಲ್ಲ ಒಕ್ಕೊಳೋರು.
ಮಧ್ಯಾಹ್ನ ಸ್ಟಡಿ ಗೆ ನಿದ್ದಿಗಣ್ಣಿನ್ಯಾಗ ಹೋಗದು. ಏನ್ ಓದತಿದ್ಯೋ ಇಲ್ಲೋ, ಲೈಬ್ರರಿ ಇಲ್ಲ ಕಂಪ್ಯೂಟರ್ ಲ್ಯಾಬ್ ಹೋಗಿ ಟೈಮ್ ಅಂತೂ ಪಾಸ್ ಮಾಡತಿದ್ವಿ. ಸ್ಟಡಿ ಟೈಮ್ ಸ್ಟಡೀಸ್ ಗಿಂತ ಮಜಾ ಮಾಡೋ ಟೈಮ್ ಅನ್ನಬೋದು. ಬುಕ್ ಕ್ರಿಕೆಟ್ , ಪಾಕೆಟ್ ರೇಡಿಯೋ ದಾಗ ಕ್ರಿಕೆಟ್ ಕಾಮೆಂಟರಿ, ಲೈನ್ಸ್ ಗೇಮ್, ಅಕಸ್ಮಾತ್ ಹೊರಗ್ ಕೂಡೋ ಚಾನ್ಸ್ ಸಿಕ್ರೆ ಕೈಗೆ ಇನ್ನು ಮಜಾ.
ಸೋಶಿಯಲ್ ಸರ್ ಡೈಲಿ ನ್ಯೂಸ್ ಹೇಳಲಿಲ್ಲ ಅಂದ್ರೆ ಪಾಠ ಮಾಡಕ್ಕೆ ಬಿಡ್ತಿರ್ಲಿಲ್ಲ. ಪಿಇಎಟಿ ಇಲ್ಲ ಆರ್ಟ್ಸ್ ಕ್ಲಾಸ್ ಇರೋ ದಿನಕ್ಕೆ ಕಾಯಿಕೊಂಡ್ ಕೂತಿರ್ತಿದ್ವಿ.
ಸಂಜಿಗೆ ಕೊಡೊ ಪಾರ್ಲೆ ಜಿ ಬಿಸ್ಕತ್ ಇಲ್ಲ ಅವಲಕ್ಕಿ ಅಂತೂ ಇನ್ನು ನೆನಪದ. ಮೆಸ್ ಬಾಜು ಲೈನ್ ನಿಂತು ಕಿಡಕಿ ನ್ಯಾಗ್ ಇಸ್ಕೊಳ್ಳೋದು. ಲೇಟ್ ಆಗಿ ಬಂದೋರಿಗೆ ಏನು ಇಲ್ಲ ಬರಿ ಟೀ ಕುಡದು ಖುಷಿ ಆಗ್ಬೇಕಿತ್ತಷ್ಟೆ.
ಸ್ಪೋರ್ಟ್ಸ್ ಟೈಮ್ ಎಲ್ಲರು ತಮ್ಮ ತಮ್ಮ ಹೌಸಿನ ಟಿ ಶರ್ಟ್ ಹಾಕ್ಕೊಂಡು ರೆಡಿ ಆಗೋದು. ಲಕ್ಕಿ ದಿನ ಇದ್ರೆ ಫುಟ್ಬಾಲ್, ಇಲ್ಲ ಕ್ರಿಕೆಟ್/ವಾಲಿಬಾಲ್ ಸಿಗೋದು. ದಿನ ಭಾಳ ಹಾಳ್ ಇದ್ರ ಪಿಇಟಿ ಸರ್ ಕಾಂಗ್ರೆಸ್ ಕ್ಲೀನ್ ಮಾಡ್ಲಿಕ್ ಹಚ್ಚೋವ್ರು. ಬೇಜಾರಾದ್ರೂ ಅದ್ರಲ್ಲೇ ಮಜಾ ಮಾಡವ್ರು ನಾವು. ಕಾಂಗ್ರೆಸ್ ಜೊತಿ ಬೆಳಿಯೋ ಉದ್ದನ್ ಹುಲ್ಲಿನ ಗಿಡದಾಗ ಸಿಗೋ ಮುಳ್ಳಿನಂತವನ್ನ ತೊಗೊಂಡ್ ಬೇರೆವ್ರ ತಲಿಗೆ ಶರ್ಟ್ ಗೆ ಒಗಿಯೋದು, ಗುಲ್ಮೊಹರ್ ಗಿಡದ್ ಒಣಗಿದ್ ಕಡ್ಡಿ ತೊಗೊಂಡ್ ಕತ್ತಿ ವರಸೆ ಆಡೋರು. ಫುಟ್ಬಾಲ್ ಅಂದ್ರೆ ಅದೇನ್ ಖುಷಿ ನೋ. ಕ್ರಿಕೆಟ್ ಗಿಂತ ಫೇವರಿಟ್ ಇತ್ತು. ಮೋಸ್ಟ್ಲಿ ಎಲ್ಲರಿಗು ಆಡ್ಲಿಕ್ ಸಿಗ್ತದ ಅಂತೇನೋ.
ಆಡಬೇಕಾದ್ರ ಏನಾದ್ರು ಎಟ್ ಆದ್ರ ಸಿದ ನರ್ಸ್ ಮೇಡಂ ಹತ್ರ ಓಡೋದು. ಅವ್ರು ಕೊಡೊ Iodex ಹಚ್ಚಿದ್ರೆ ಸಾಕು ಎಂಥ ಪೈನ್ ಇದ್ರೂ ಫಟ್ ಅಂತ ಮಾಯ ಆಗೋದು. ಏನೇ ಬ್ಯಾನಿ ಇದ್ರೂ ಒಂದೇ ಥರ ಕಾಣೋ ಟ್ಯಾಬ್ಲೆಟ್ ಕೊಟ್ರು ಎಲ್ಲ ಕಡಿಮೆ ಆಗೋದು. ಅದೇನ್ ಮ್ಯಾಜಿಕ್ ಮಾಡಿರ್ತೀದ್ರೋ ನರ್ಸ್ ಮೇಡಂ. ಏನೇ ಅನ್ರಿ ಎಲ್ಲಕ್ಕಿಂತ ಜಾಸ್ತಿ ನಮ್ಮನ್ ಕಾಳಜಿ ಮಾಡಿದ್ದೂ ಅಂದ್ರೆ ಅವ್ರೆ.
ಸಂಜಿ ಸ್ಟಡಿಸ್ ಬೇರೆ ಮಜಾ. ಕ್ಲಾಸ್ ನ್ಯಾಗ ಕೂಡೋ ಬದ್ಲಿ ರೋಡ್ ಮ್ಯಾಲೋ ಸ್ಟ್ರೀಟ್ ಲೈಟ್ಸ್ ಕೆಳಗೋ ಹೋಗಿ ಕೂಡದು. ಎಷ್ಟೇ ಹುಳ ಕಡುದ್ರು ಏಳತಿರಲಿಲ್ಲ. ಟೀಚರ್ಸ್ ಇಂದ ಕಣ್ಣು ತಪ್ಸಿ ದೂರ ಕುಡೋದೇ ಒಂದು ಸಕ್ಸಸ್.
ಕೋ ಎಡ್ ಸ್ಕೂಲ್ ಆದರು ಹುಡಗೀರ್ ಜೊತಿಗೆ ಮಾತಾಡೋದಂತೂ ಕಮ್ಮಿ ನೇ. ಟೀಚರ್ಸ್ ಕಣ್ಣಿಗೆ ಬಿದ್ರೆ ಅಷ್ಟೇ ಕಥಿ. ಊಟ ಮಾಡೋಮುಂದ, ಕ್ಲಾಸ್ ನ್ಯಾಗ, ಮತ್ತ ಮಧ್ಯಾಹ್ನದ ಸ್ಟಡಿ ಟೈಮ್ ಗೆ ಅಷ್ಟ ಅವ್ರ ದರ್ಶನ. ಅದು ಬಿಟ್ರ ಸ್ಪೋರ್ಟ್ಸ್ ಟೈಮ್ ನ್ಯಾಗ ಬ್ಯಾಸ್ಕೆಟ್ಬಾಲ್ ಇಲ್ಲ ಟೇಬಲ್ ಟೆನಿಸ್ ಅದೊಂದು ಕಾಮನ್ ಇರ್ತಿತ್ತು.
ಹುಡ್ಗೀರಿಗೆ ಏನೇನೋ ಎಕ್ಸ್ಟ್ರಾ ಫೆಸಿಲಿಟಿ ಇರತಾವ ನಮ್ಗೆಲ್ಲಾ ಏನು ಇರಲ್ಲ ಅಂತ ಏನೇನೋ ಸುದ್ದಿ ಬರೋವು. ಬಟ್ ಅವರಿಗಿಂತ ನಮಗೆ ಫ್ರೀ ಅದ, ಕಾಂಪೌಂಡ್ ಹಾರಿ ಹೋಗಬೋದು ಅಂತ ಖುಷಿ ಆಗ್ತಿದ್ವಿ. ಅಪರೂಪಕ್ಕ ಒಮ್ಮೆ ಸಂಡೆ ಮೂವಿ ತೋರಸ್ಲಿಕ್ಕೆ ಅಲೋ ಮಾಡತಿದ್ರು. ಅದ್ರಾಗೂ ಹುಡುಗೀರ್ಗೆ ಫೇವರ್. ಮೊದ್ಲು ಅವ್ರು ನೋಡಿ ಆಮೇಲೆ ನಮಗ. ಅವ್ರಿಗೆ ಎರಡು ಮೊವಿವ ಆದ್ರ ನಮಗ ಒಂದ. ಆದರು ಕೆಲವೊಬ್ರು ಸೀನಿಯರ್ಸ್ ಏನೋ ಮಾಡಿ ಇನ್ನೊಂದ್ ಮೂವಿ ನೋಡ್ಲಿಕ್ ಟ್ರೈ ಮಾಡೋರು. ಕೆಲವೊಂದ್ಸಲ ಜೂನಿಯರ್ಸ್ ನ ಓಡ್ಸಿ ನೂ. :-ಪಿ
ಖರೆ ಹೇಳ್ಬೇಕಂದ್ರ ನವೋದಯದಾಗ ನಮಗೆ ಅಂತ ಇರೋ ಟೈಮೇ ರಾತ್ರಿ ಊಟ ಆದ್ಮೇಲೆ. ಹೌಸ್ ಮಾಸ್ಟರ್ ಅಟೆಂಡೆನ್ಸ್ ತೊಗೊಂಡ್ ಹೋಗೋ ತನಕ ಅಲ್ಲೇ ಗ್ರೌಂಡ್ ನ್ಯಾಗೂ ಇಲ್ಲ ವಾಟರ್ ಟ್ಯಾಂಕ್ ಮ್ಯಾಲೋ ಕೂತು ಹರಟಿ ಹೊಡಿಯೋದು. ಏನಾದ್ರು ಹೋಮೇವರ್ಕ್ ಕೊಟ್ಟಿದ್ರ ಮೊಗಸೋದು. ಜೂನಿಯರ್ಸ್ ಸೀನಿಯರ್ಸ್ ಎಲ್ಲ ಸೇರಿ ಇರೋ ಟೈಮ್ ಅಂದ್ರ ಅದೇ. ಜೂನಿಯರ್ ಹೌಸ್ ಗೆ ಹೋಗಿ ಊರಿಂದ ತಂದಿರೋ ಸ್ವೀಟ್ಸ್ ಎಲ್ಲ ಕಿತ್ಕೊಳ್ಳೋದೋ. ಯಾರ್ ಎಷ್ಟ್ ಬೈದ್ರು ಏನು ಎಫೆಕ್ಟ್ ಆಗ್ತಿರ್ಲಿಲ್ಲ. ಯಾರಾದ್ರೂ ಜೂನಿಯರ್ ಏನಾದ್ರು ಕಿತಾಪತಿ ಮಾಡ್ಯಾನ ಅಂತ ಗೊತ್ತಾದ್ರೆ ಅವ್ನಿಗೆ ವಿಚಾರಿಸೋದು. ಇಲ್ಲ ಯಾರೋ ಪಾಪದ್ ಪ್ರಾಣಿ ಸಿಕ್ರೆ ಸುಮ್ನೆ ಗೋಲೋಯ್ಕೊಳ್ಳೋದು.
ಏನೇನ್ ಮಾಡಕ್ ಅಲೋ ಇಲ್ಲ ಅದನ್ನೇ ಜಾಸ್ತಿ ಮಾಡ್ತಿದ್ವಿ. ಐರನ್ ಬಾಕ್ಸ್ ಇಟ್ಕೊಳ್ಳೋದು, ಟೇಪ್ ರೆಕಾರ್ಡರ್, ಪಾಕೆಟ್ ರೇಡಿಯೋ. ಭಾಳ್ ಡೇರಿಂಗ್ ಇರೋರು ಸೈಲೆಂಟಾಗಿ ಕಾಂಪೌಂಡ್ ಹಾರಿ ಕುಕ್ನೂರ್ ಗ ಹೋಗಿ ಸಿನೆಮಾ ನು ನೋಡ್ಕೊಂಡ್ ಬರೋರು. ನೋಡ್ಕೊಂಡ್ ಬಂದು ಚಂದು ಇಲ್ಲ ಶಾಂತಪ್ಪನ ಕೈಯಾಗ ಸಿಕ್ಕಿ ಬಿದ್ದವರು ನೆಕ್ಸ್ಟ್ ಡೇ ಅಸ್ಸೆಂಬಲಿ ಮ್ಯಾಲೆ. :-ಪಿ
ಎಷ್ಟೋ ಸಲ ಮುಂಜಾನೆ ತನಕ ರೂಮ್ ನ್ಯಾಗೆ ಕಿರ್ರ್ ಇಲ್ಲ ಬಿಸಿನೆಸ್ ಗೇಮ್ ಆಡ್ಕೋತ ಕೂಡೋದು.
ಟೆರೇಸ್ ಮೇಲೆ ಬೆಡ್ ಹಾಸ್ಕೊಂಡು ನಕ್ಷತ್ರ ನೋಡ್ಕೊತು ಮಲಗಿದ್ ಭಾವನೆ ಖುಷಿ ಯಾವ್ ಫೈವ್ ಸ್ಟಾರ್ ಹೋಟೆಲ್ ನ್ಯಾಗ ಎಂಥ ಬೆಡ್ ಮೇಲೆ ಮಲ್ಕೊಂಡ್ರೂ ಸಿಗಲ್ಲ ಅನ್ಸುತ್ತ.
ಇಡೀ ದಿನದ್ ಕ್ಷಣಗಳನ್ನ ನೆನಸ್ಕೊತ, ಬರೋ ದಿನದ ಕನಸನ್ನ ಕಾಣತಾ, ನಿದ್ದಿ ಹತ್ತಿದ್ದೇ ಗೊತ್ತಾಗತಿರ್ಲಿಲ್ಲ. ಮತ್ತೆ ಎಚ್ಚರ ಆಗೋದು 'ಮೂಷಿಕ ವಾಹನ ಮೋದಕ ಹಸ್ತ' ಕೇಳಿದಾಗೆ.
ಇಡೀ ದಿನದ್ ಕ್ಷಣಗಳನ್ನ ನೆನಸ್ಕೊತ, ಬರೋ ದಿನದ ಕನಸನ್ನ ಕಾಣತಾ, ನಿದ್ದಿ ಹತ್ತಿದ್ದೇ ಗೊತ್ತಾಗತಿರ್ಲಿಲ್ಲ. ಮತ್ತೆ ಎಚ್ಚರ ಆಗೋದು 'ಮೂಷಿಕ ವಾಹನ ಮೋದಕ ಹಸ್ತ' ಕೇಳಿದಾಗೆ.
- ಕಾರ್ತೀಕ್ ಜೋಶಿ
P.S : My attempt at remembering a day in any Boy's life in Navodaya. Comments are welcome. I might have missed many important memories. Please add them in comments.
Very nice.. 7 important years of our lives.. So many memories...
ReplyDeleteYes. Thank you Sweetie. :-)
DeleteAtyadbhuta baraha ..Nanna ella nenapugalu refresh advu
ReplyDeleteThank you Mouni.
DeleteVery nice Kazi... I request all to make one short movie on this..
ReplyDeleteVery nice Kazi... I request all to make one short movie on this..
ReplyDeleteThanks le. We will try..
Deleteಇದು ಒಂದು ದಿನದ ಕತೆ ಅಲ್ಲ. ಏಳು ವರ್ಷದ ನೆನಪು ಕಣ್ಣಿನ ಮುಂದೆ ಬಂದಂತೆ ಆಯಿತು. ಪ್ರತಿ ಸಣ್ಣ ಪುಟ್ಟ ಕ್ಷಣಗಳನ್ನು ಬಳಸದಂತೆ ಬರೆದ ನಿಮಗೆ ಧನ್ಯವಾದಗಳು.
ReplyDeleteThank you Vasanth.
DeleteWonderful writing Kaji,. Felt like I spent a day again ;) Keep the good work going..
ReplyDeleteThank you.
Deleteತುಂಬಾ ಚೆನ್ನಾಗಿ ಬರ್ದಿ ಭಯ್ಯಾ.
ReplyDeleteThank you.
Deleteತುಂಬಾ ಚೆನ್ನಾಗಿ ಬರ್ದಿ ಭಯ್ಯಾ.
ReplyDeleteDo share it with your batch and other junior batch whatsapp groups. :-)
Deleteಸವಿ ಸವಿ ನೆನಪುಗಳು.. ಕಳೆದು ಹೋದ ನೆನಪು ಮರುಕಳಿಸಿದ್ದಕ್ಕೆ ಧನ್ಯವಾದಗಳು
ReplyDeleteThank you...
DeleteDo share it with your batch and other junior batch whatsapp groups. :-)
DeleteThis comment has been removed by the author.
ReplyDeleteGood writing Kaji..... Continue writing...Really went back to school life till I completely read it.
ReplyDeleteThanks Naveen
Deleteಸ್ವರ್ಗ ಒಂದು ಕ್ಷಣ ರಪ್ ಅಂತ ಪಾಸದಂಗಾಯ್ತು.. ನವೋದಯ ದಲ್ಲಿ ಕಳೆದ ಒಂದೊಂದು ಕ್ಷಣವೂ ಎಂದೆಂದಿಗೂ ಮರೆಯಲಾಗದ ಅನುಭವ! ಬಹು ಪಾಲು ದಿನಚರಿಯನ್ನು ಬಹಳ ತಾಳ್ಮೆ ಯಿಂದ ಬರೆದು ಪ್ರಕಟಿಸಿದ್ದಕ್ಕೆ ಥ್ಯಾಂಕ್ಸ್ ಬ್ಯಾ....
ReplyDeleteI mean ಭಯ್ಯಾ!
Thanks Praveen.
DeleteDo share it with your batch and other junior batch whatsapp groups. :-)
Deleteನಿಮ್ಮ ಬರವಣಿಗೆ ತುಂಬಾ ಇಷ್ಟ ಆಯ್ತು.
ReplyDeleteನಿಮ್ಮ ಲೇಖನದಲ್ಲಿರುವ ಘಟನಾವಳಿಗಳು ಎಲ್ಲವೂ ನೈಜ. ಯಾವುದೂ ಹೆಚ್ಚಿಲ್ಲ , ಯಾವುದೂ ಕಮ್ಮಿ ಇಲ್ಲ. ಆ ದಿನಗಳನ್ನು ನಿಮ್ಮ ಬರಹವನ್ನು ಓದುತ್ತಾ ಮೆಲುಕು ಹಾಕಿದೆ.
ಅದೆಷ್ಟು ಅನುಭವಿಸಿ ಬರೆದಿದ್ದೀರಿ. ಇವನ್ನೆಲ್ಲಾ ನಾವೂ ಅನುಭವಿಸಿದ್ದರೂ ನಿಮ್ಮ ಹಾಗೆ ಇಷ್ಟು ಚಂದ ಬರೆಯಲಾರೆವು. ಒಳ್ಳೆಯ ಬರಗಾರರು ನೀವು.
ಇವನ್ನೆಲ್ಲಾ ನೀವು ಅದ್ಹೇಗೆ ಜ್ಞಾಪಕದಲ್ಲಿಟ್ಟುಕೊಂಡಿದ್ದೀರಿ ಎಂದು ನನಗೆ ಆಶ್ಚಯವಾಗುತ್ತಿದೆ.
ಮನಸ್ಸಿಗೆ ಹತ್ತಿರದ , ಮನಸ್ಸಿಗೆ ಮುದ ನೀಡುವ ಲೇಖನ ಓದಿದ ಖುಷಿ ನನ್ನದು.
ನೀವು ಇನ್ನೂ ಹೆಚ್ಚು ಹೆಚ್ಚು ಬರೆಯಿರಿ. ಕನ್ನಡದಲ್ಲೇ ಬರೆಯಿರಿ ಎಂಬುದು ನನ್ನ ಕೋರಿಕೆ. ಕನ್ನಡಕ್ಕೆ ನಿಮ್ಮಂತಹ ಬರಹಗಾರರ ಅವಶ್ಯಕತೆ ಇದೆ.
ಶುಭ ಹಾರೈಕೆಗಳೊಂದಿಗೆ.
- ಅಭಿನಂದನ್
ತುಂಬಾ ಚನ್ನಾಗಿ ಬರ್ದಿದಿಯ ಕಾರ್ತಿಕ್ ಅದ್ರಲ್ಲೂ ಕನ್ನಡದಲ್ಲಿ ಬರ್ದಿದ್ದು ತುಂಬಾನೇ ಖುಷಿ ಕೊಡ್ತು. ನಮ್ಮ ನವೋದಯ ಜೀವನ ಮತ್ತೊಮ್ಮೆ ನೆನಪಿಸಿದ್ಕೆ ತುಂಬಾ ದನ್ಯವಾದ.
DeleteHappy Reading ಅಂತ ಕರೀತಾರಲ್ಲ ನಿನ್ ಬ್ಲಾಗ್ ಓದಿದ ಮೇಲೆ ಅದ್ಕೆ ಸರಿಯಾಗಿ ಅರ್ಥ ಬಂತು.
Thank you Borther.
DeleteThanks bro for remembering those 7 years life once again. Its awesome
DeleteGlad you liked it :-)
DeleteAwesome Anna.... jus gave retrospection of tht fantabulous 7 years....
ReplyDeleteLoved tht kichidi part😘... n plate washing style....😂..
Anna possible add the experience of the days of last days feelings... the most emotional day of every navodayan I guess...
- 22nd batch(2007-14)
:-) Sure. Will try to cover it too.
DeleteVery nice. Thank you so much.
ReplyDelete:-)
DeleteVery nice .....
ReplyDeleteಮಸ್ತ್ ಬರ್ದೀ ಲೇ.. ಭಾಳ ಖುಷಿ ಆಯ್ತು ಓದಿ... ನಂಗ ಗೊತ್ ಇದ್ದಿಲ್ಲ ನನ್ನ ತಮ್ಮ ಇಷ್ಟು ಛಂದ ಬರೀತಾನ ಕನ್ನಡದಾಗ ಅಂತ..I'm so proud of you. Keep writing. I was smiling through out the blog.. So cute.. I loved your style of writing... Super 👌 👌 👌
ReplyDeleteಅವ್ನೋವ್ನು ಕಾಜಿ ಬೆಂಕಿ ಲೆ... ನಮ್ಮ ಏಳು ವರ್ಷದ ದಿನ ನಿತ್ಯದ ಚಟುವಟಿಕೆಗಳನ್ನು ಅದ್ಭುತಾವಾಗಿ ವರ್ಣಿಸಿದಕ್ಕೆ ತುಂಬು ಹೃದಯದ ಧನ್ಯವಾದಗಳು.. 7 ವರ್ಷದ ಆ ಕಷ್ಟದ ಜೀವನ ಈಗ ಎಲ್ಲರನ್ನೂ 70 ವರ್ಷ ಜೀವನವನ್ನು ಸುಖಮಯವಾಗಿ ನಡೆಸೋ ದಾರಿ ಮಾಡಿದೆ .... ನಿನ್ನ ಬರವಣಿಗೆ ನನ್ನದೊಂದು ಸಲಾಂ...
ReplyDelete