Posts

Showing posts from December, 2016

ನವೋದಯ ನೆನಪು

ನವೋದಯದ ಒಂದು ದಿನ ‘ಮೂಷಿಕ ವಾಹನ ಮೋದಕ ಹಸ್ತ’ ಅಂತ ಹಾಡ್ ಬಂದಾಗೇ ಎಚ್ಚರ ಆಗೋದು. ಒಂದೊಂದ್ ಸಲ ಅದು ಕನಸೇನೂ ಅನ್ಸೋದು ಆದ್ರೆ ಅದರ ಜೊತಿಗೆ ಪಿಇಟಿ ಸರ್ ವಿಸಿಲ್ ಬಂತು ಅಂದ್ರೆ ಸಾಕು, ಧಡ್ ಧಡ್ ಧಡ್ ಧಡ್ ಅಂತ ಓಡೋದೇ ಎಲ್ಲಾರು. ಕೆಲ್ವೊಬ್ಬರಂತೂ ಅರ್ಧ ಗಂಟೆ ಮೊದಲೇ ಎದ್ದು ಹಲ್ಲು ಉಜ್ಜಿ ರೆಡಿ ಆಗಿರೋರು. ಅದೆಂಗೆ ಟೈಮ್ ಸಿಗ್ತಿತ್ತೋ. ರಾತ್ರಿ ಮಲ್ಕೊಳಕ್ಕಿಂತ ಮೊದ್ಲು ಎಲ್ಲಾರ್ದೂ ಒಂದೇ ವಿಶ್ ಇರೋದು.  ಪಿಇಟಿ ಸರ್ ಗೆ ಹುಷಾರ್ ಇರಲಾರದಂಗ ಆಗ್ಲಿ, ಲೇಟ್ ಆಗಿ ಏಳಲಿ ಅಂತ. ಏಳು ವರ್ಷದಾಗ ಬೇರೆ ಏನಾದ್ರು ಆಗಿರ್ಬೋದು ಬಟ್ ಇದಂತೂ ಆಗಿಲ್ಲ. ಮುಂಜಾನೆ ನಾಲ್ಕು ನಲ್ವತ್ತೈದು ಆಯ್ತಂದ್ರೆ ವಿಸಲ್ ಶುರು. ಎಷ್ಟೊಂದ್ ಸರ್ತಿ ಸರ್ ಮೂಡ್ ಸರಿ ಇರ್ಲಿಲ್ಲ ಅಂದ್ರೆ ಹೌಸ್ ಒಳಗ್ ಬಂದು ಸಿಕ್ಕೋರಿಗೆಲ್ಲ ರಪ್ ರಪ್ ಅಂತ ಬಾರಿಸ್ತಿದ್ರು. ಚಳಿಗಾಲದಾಗಂತೂ ಏಟು ಬಿದ್ರೆ ಅಟ್ ಲೀಸ್ಟ್ ಮೂರ್ ಟಾಸ್ ಇರ್ತಿತ್ತು ನೋವು. ಒಳಗ್ ಬಂದ್ರಂತ ಗೊತ್ತಾಗೋದೇ ತಡ ಎಷ್ಟೊಂದ್ ಜನ ಕಿಡಕಿ ನ್ಯಾಗ್ ಆಗಿರೋ ಗ್ಯಾಪ್ ನ್ಯಾಗೆ ಹಾರ್ಕೊಂಡ್ ಬಿಡೋರು. ನೀರಿನ ಟ್ಯಾಂಕಿಗೆ ಓಡಿಹೋಗಿ ಬಾಯಿ ಮುಕ್ಕಳಿಸ್ಕೊಂಡು ಗ್ರೌಂಡ್ ಗೆ ಒಡೋರು.   ಬಂಡಿ ಇಂದ ಹಾಡ್ ಅಂತೂ ಹಂಗೆ ಬರ್ತಿರತಿತ್ತು. ಅದರ ಜೊತಿಗೆ ಗಾಂಧಿ ಕಂಪನಿ ಕ್ವಾರಿ ನು ಸ್ಟಾರ್ಟ್ ಆಗಿದ್ರೆ ಮುಗಿತು, ಬಾಜು ಇರೋರೋ ಮಾತಾಡೋದು ಕೇಳಿಸ್ತಿರ್ಲಿಲ್ಲ. ಅಟೆಂಡೆನ್ಸ್ ಟೈಮ್ ನ್ಯಾಗ್ ಯಾರಾದ್ರೂ ಬಂದಿಲ್ಲ ಅಂತ ಸರ್ ಗ...