ACL ಅನ್ನೋ ಮಹಾ ಪರ್ವ...
2015 ರಲ್ಲಿ ನಾವು ಇದನ್ನ ಆರಂಭ ಮಾಡಿದಾಗ ಬಹುಶಃ ನಮಗೂನು ಗೊತ್ತಿರಲಿಲ್ಲ ಇದು ಇಷ್ಟು ದೊಡ್ಡ ಕೂಟ ಆಗುತ್ತಾ ಅಂತ. ಬಿಟಿಎಂ ನ ಒಂದು ರೂಮ್ ನಲ್ಲಿ ಹುಟ್ಟಿಕೊಂಡ ಒಂದು ಸಣ್ಣ ಯೋಚನೆ ಇಂಥ ಮಹಾ ಹಬ್ಬ ಆಗಿರೋದು ಒಂದು ಅಧ್ಭುತ ನೇ. ಇನ್ನೇನು ಒಂದೇ ವಾರದಲ್ಲಿ ಹೊಸ ಆವೃತ್ತಿ ಪ್ರಾರಂಭ ಆಗ್ತಾ ಇದೆ. ಅದಕ್ಕಿಂತ ಮೊದ್ಲು ಇಲ್ಲೀ ವರೆಗೂ ಆಗಿರೋ ಮೂರು ಆವೃತ್ತಿಗಳ ನೆನಪುಗಳನ್ನ ಮೆಲುಕು ಹಾಕೋಣ ಬನ್ನಿ. ಅಂಕುರ್ ಚಾಂಪಿಯನ್ಸ್ ಲೀಗ್ ಆವೃತ್ತಿ 1 : ಬಿಟಿಎಂ vs ಜೆಪಿ ನಗರ್ ಅಂತ ಪುಟ್ಟೇನಹಳ್ಳಿ ಆಟದ ಮೈದಾನದಲ್ಲಿ ಪ್ರತಿ ವಾರ ಎರಡು ರೂಮ್ ಮಧ್ಯ ಕ್ರಿಕೆಟ್ ಆಡ್ತಾ ಆಡ್ತಾ, ನವೋದಯದ ಎಲ್ಲ ಬ್ಯಾಚ್ ನು ಒಟ್ಟು ಮಾಡಿ ಆಡಿದ್ರೆ ಇನ್ನೂ ಚೆನ್ನಾಗಿರುತ್ತಲ್ಲ ಅಂತ ಆರಂಭ ಆಗಿದ್ದೇ ಅಂಕುರ್ ಚಾಂಪಿಯನ್ಸ್ ಲೀಗ್. ಹಂಗೂ ಹಿಂಗೂ ಮಾಡಿ ಏಪ್ರಿಲ್ 25, 26 2015 ರಂದು ಬನ್ನೇರುಘಟ್ಟ ಐಐಟಿ ಮೈದಾನದಲ್ಲಿ ಅಂಕುರ್ ಚಾಂಪಿಯನ್ಸ್ ಲೀಗ್ ಒಂದನೇ ಆವೃತ್ತಿ ಆರಂಭ ಆಯ್ತು. ಮೊದಲನೇ ಆವೃತ್ತಿ ಗೆ 9 ಮತ್ತು 11ನೆ ಬ್ಯಾಚ್ ನ ಅಣ್ಣದ್ರಿಂದ ಸೇರ್ಕೊಂಡು 22 ನೇ ಬ್ಯಾಚ್ ನ ತಮ್ಮಂದಿರ ವರೆಗೂ ಬಂದಿದ್ದು ಬರಿ 12 ಟೀಮ್ಸ್ ಮಾತ್ರ. ನವೋದಯ ಬಿಟ್ಟು ಎಷ್ಟೋ ವರ್ಷಗಳಾಗಿದ್ರು, ಇನ್ನೂ ನವೋದಯದಲ್ಲೇ ಇದೀವಿ ಅನ್ನೋ ಥರ ಪ್ರತಿಯೊಬ್ಬರು ಮನಸಾರೆ ಆಟ ಆಡಿದ್ರು. ಒಂದೇ ಮೈದಾನ, ಮಳೆರಾಯನ ಅಡಚಣೆಗಳ ನಡುವೆಯೂ ಮೊದಲನೇ ದಿನ ಲೀಗ್ ಪಂದ್ಯಗಳು ಹಾಗೂ ಎರಡನೇ ದಿನ ನಾಕ್ ಔಟ್ ಪಂದ್ಯಗಳು...